English shape=
      

ವಾರದ ಸಂದೇಶ - Word For The Week

"ವಾರದ ಸಂದೇಶ" ವು ಪ್ರತೀ ವಾರ ಕಳುಹಿಸಲ್ಪಡುವ ಪತ್ರಿಕೆಯಾಗಿದೆ. ಪ್ರತೀ ಸಂಚಿಕೆಯು ಝ್ಯಾಕ್ ಪೂನನ್ ರವರ ಲೇಖನ, ಪುಸ್ತಕ ಅಥವಾ ಪ್ರಬೋಧನೆಗಳಿಂದ ಆಯ್ದ ಭಾಗವಾಗಿರುತ್ತದೆ.
2011 |  2012 |  2013
ವಿಧೇಯತೆಯು ನಿನ್ನ ಜೀವನವನ್ನು ಮಹಿಮೆಯುಳ್ಳದ್ದಾಗಿಸುವುದು
ಮೇ 2012 (4) - ಝ್ಯಾಕ್ ಪೂನನ್

ಈ ಜಗತ್ತು ಕಂಡ ಜೀವನಗಳಲ್ಲಿ ಅತ್ಯಂತ ಸುಂದರವಾದದ್ದು, ಅತ್ಯಂತ ಕ್ರಮಬದ್ಧವಾದದ್ದು ಹಾಗು ಅತ್ಯಂತ ಶಾಂತಿಯುತವಾದದ್ದೆಂದರೆ ಯೇಸುವಿನ ಜೀವನವಾಗಿತ್ತು. ಅದು ಏಕೆಂದರೆ, ದೇವರ ವಾಕ್ಯಕ್ಕೆ ಅವನು ಸಂಪೂರ್ಣವಾಗಿ ವಿಧೇಯನಾಗಿದ್ದನು.

ಭೌತಿಕ ವಿಶ್ವದಲ್ಲಿರುವ ಕ್ರಮಬದ್ಧತೆಯನ್ನು ಗಮನಿಸು. ಆಕಾಶದಲ್ಲಿನ ನಕ್ಷತ್ರಗಳು ಮತ್ತು ಗ್ರಹಗಳು ಎಷ್ಟೊಂದು ನಿರ್ದಿಷ್ಟ ಕ್ರಮದಲ್ಲಿ ಚಲಿಸುತ್ತವೆಯೆಂದರೆ, ಅವುಗಳ ಪ್ರಕಾರ, (ಅವುಗಳನ್ನು ಗಮನಿಸಿ) ಸೆಕೆಂಡಿನ ಸಹಸ್ರಾಂಶಕ್ಕೆ ಸರಿಯಾಗಿ ನಾವು ಸಮಯವನ್ನು ಸರಿಯಾಗಿ ನಿಗದಿಪಡಿಸಬಹುದು. ಅವುಗಳ ಮೇಲೆ ನಾವು ಎಷ್ಟಾಗಿ ಹೊಂದಿಕೊಂಡಿರಬಹುದೆಂದರೆ, ಖಗೋಳ ಶಾಸ್ತ್ರಜ್ಞರು ಭವಿಷ್ಯತ್ತಿನಲ್ಲಿ (ಮುಂದೆ) ಯಾವುದೇ ದಿನದಂದು ಯಾವುದೇ ನಕ್ಷತ್ರ ಅಥವಾ ಗ್ರಹದ ಸ್ಥಾನವನ್ನು ತಿಳಿಯಬಹುದು (ಮುಂದೆ ಯಾವುದೇ ನಕ್ಷತ್ರ ಅಥವಾ ಗ್ರಹವು ಯಾವ ಸ್ಥಾನದಲ್ಲಿರುತ್ತದೆ ಎಂಬುದನ್ನು ಮುಂಚಿತವಾಗಿಯೇ ತಿಳಿಯಬಹುದು). ಅಂಥಹ ಸಂಪೂರ್ಣವಾದ ಕ್ರಮಬದ್ಧತೆಯ ರಹಸ್ಯವೇನು? ಒಂದೇ ಒಂದು: ಅವುಗಳು ಸೃಷ್ಟಿಕರ್ತನಾದ ದೇವರು ತಮಗೆ ನಿಗದಿಪಡಿಸಿದ ಕಕ್ಷೆಯಲ್ಲಿ, ದೇವರು ನಿಗದಿಪಡಿಸಿದ ವೇಗದಲ್ಲಿ ಸುತ್ತುತ್ತಾ ದೇವರ ಚಿತ್ತಕ್ಕೆ ವಿಧೇಯರಾಗಿದ್ದಾರೆ.

ಎಲ್ಲಿ ದೇವರ ಚಿತ್ತಕ್ಕೆ ವಿಧೇಯತೆ ಇದೆಯೋ, ಅಲ್ಲಿ ಸಂಪೂರ್ಣತೆ ಹಾಗೂ ಅಂದವಿರುತ್ತದೆ. ದೇವರ ಚಿತ್ತಕ್ಕೆ ಅವಿಧೇಯತೆ ಎಲ್ಲಿ ಇದೆಯೋ ಅಲ್ಲಿ ಗೊಂದಲ ಹಾಗು ಕುರೂಪತನ ಇರುತ್ತದೆ.

ದೇವರ ಆಜ್ಞೆಗಳು ಭಾರವಲ್ಲ ಹಾಗೂ ಅವು ನಮಗೆ ಅತ್ಯುತ್ತಮವಾದುವುಗಳು ಎಂಬ ಸತ್ಯಕ್ಕೆ ನಕ್ಷತ್ರಗಳು ಕೂಡಾ ಮೂಖ ಸಾಕ್ಷಿಗಳಾಗಿವೆ.

ಯೇಸುವಿನ ಜೀವನವು ಈಗಿನ ಮತ್ತು ಮುಂದೆಬರುವ ಜೀವನದಲ್ಲಿರುವ ಎಲ್ಲಾ ವಸ್ತುಗಳಲ್ಲಿ ದೈವಿಕತನವೊಂದೇ ಲಾಭದಾಯಕವಾದದ್ದು ಎಂಬ ಸತ್ಯಕ್ಕೆ ಸಾಕ್ಷಿಯಾಯಿತು (1 ತಿಮೊ. 4:8). ದೈವಿಕ ಮನುಷ್ಯನಿಗಿಂತ ಯಾವುದೇ ಮನುಷ್ಯನು ಹೆಚ್ಚು ಸಂತೋಷದಿಂದ, ಹೆಚ್ಚು ಶಾಂತಿಯಿಂದ, ಹೆಚ್ಚು ತೃಪ್ತಿಯಿಂದ ಬಾಳಲಾರನು.

"ಯೆಹೋವನ ಭಯ ಜೀವದ ಬುಗ್ಗೆ" (ಜ್ಞಾನೋಕ್ತಿಗಳು 14:27); "ಯೆಹೋವನಲ್ಲಿ ದಿನವೆಲ್ಲಾ ಭಯಭಕ್ತಿಯುಳ್ಳವನಾಗಿರು" (ಜ್ಞಾನೋಕ್ತಿಗಳು 23:17) ಎಂಬ ಆಜ್ಞೆಯನ್ನು ಯೇಸುವು ಪಾಲಿಸಿದನು.

ದೇವರ ಮೇಲಣ ಭಯಭಕ್ತಿಯ ನಿಮಿತ್ತ ಯೇಸುವಿನ ಪ್ರಾರ್ಥನೆಗಳು ಕೇಳಲ್ಪಟ್ಟವು. (ಇಬ್ರಿಯರಿಗೆ 5:7). ಯೇಸುವಿನ ಮೇಲೆ ಆಕಾಶವು ಯಾವಾಗಲೂ ತೆರೆದಿತ್ತು. ಏಕೆಂದರೆ ಅವನು ದೇವರ ಭಯದಲ್ಲಿ ಜೀವಿಸಿದನು. "ನಾನು ನನ್ನ ತಂದೆಗೆ ಗೌರವದಿಂದ ಭಯಪಡುತ್ತೇನೆ" (ಯೋಹಾನನು 8:49 Amplified Bible), ಎಂದು ಅವನು ಒಮ್ಮೆ ಹೇಳಿದನು. ಯೆಹೋವನ ಭಯವೇ ಜ್ಞಾನಕ್ಕೆ ಮೂಲವು" (ಜ್ಞಾನೋಕ್ತಿಗಳು 9:10) ಎಂಬ ಸತ್ಯವನ್ನು ಸಾರುವ ವಾಕ್ಯವನ್ನು ಯೇಸುವು ತನ್ನ ಜೀವನದಲ್ಲಿ ಸಾಬೀತುಪಡಿಸಿದನು.

ಅನುವಾದಾ : ಜಾನ್     ಈ ಪುಟವನ್ನು ಮುದ್ರಿಸಿಕೊಳ್ಳಿ   ಈ ಪುಟವನ್ನು ಕಳುಹಿಸಿ

"ವಾರದ ಸಂದೇಶ!" - ನಿಮ್ಮ ಯಾವುದೇ ಅನಿಸಿಕೆ ಅಥವಾ ಪ್ರಶೆಗಳಿದ್ದಲ್ಲಿ ದಯವಿಟ್ಟು ನಮಗೆ ಬರೆಯಿರಿ :
kannada@cfcindia.com, cfc@cfcindia.com
ಈ ಪುಟವನ್ನು ಸ್ನೇಹಿತರಿಗೆ ಕಳುಹಿಸಿ | ವಾರದ ಸಂದೇಶ | ದೈವ ಸಂದೇಶಗಳು | ಆಡಿಯೋ| ವಿಡಿಯೋ | ಸಂಪರ್ಕಿಸಿರಿ

© Copyright - Christian Fellowship Church , Bangalore. (INDIA)