English shape=
      

ವಾರದ ಸಂದೇಶ - Word For The Week

"ವಾರದ ಸಂದೇಶ" ವು ಪ್ರತೀ ವಾರ ಕಳುಹಿಸಲ್ಪಡುವ ಪತ್ರಿಕೆಯಾಗಿದೆ. ಪ್ರತೀ ಸಂಚಿಕೆಯು ಝ್ಯಾಕ್ ಪೂನನ್ ರವರ ಲೇಖನ, ಪುಸ್ತಕ ಅಥವಾ ಪ್ರಬೋಧನೆಗಳಿಂದ ಆಯ್ದ ಭಾಗವಾಗಿರುತ್ತದೆ.
2011 |  2012 |  2013
ದೇವರ ವಾಕ್ಯದ ಬಲವನ್ನು ಅನುಭವಿಸುವುದು
ಮೇ 2011 (2) - ಝ್ಯಾಕ್ ಪೂನನ್

ಪ್ರಕಟನೆ 10:8-11 ರಲ್ಲಿ ಬರೆದಿದೆ: ಆನಂತರ ಪರಲೋಕದಿಂದ ನನಗೆ ಕಳಿಸಿದ್ದ ಶಬ್ದವು ತಿರಿಗಿ ನನ್ನೂಂದಿಗೆ ಮಾತಾಡಿ - ನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತುಕೊಂಡಿರುವ ದೂತನ ಕೈಯಲ್ಲಿರುವ ಆ ಬಿಚ್ಚಿದ ಸುರುಳಿಯನ್ನು ತೆಗೆದುಕೋ ಎಂದು ಹೇಳಿತು. ನಾನು ಆ ದೂತನ ಬಳಿಗೆ ಹೋಗಿ - ಆ ಚಿಕ್ಕ ಸುರುಳಿಯನ್ನು ನನಗೆ ಕೂಡು ಎಂದು ಕೇಳಲು ಅವನು ನನಗೆ - ನೀನು ಇದನ್ನು ತೆಗೆದುಕೊಂಡು ತಿಂದುಬಿಡು.ಇದು ನಿನ್ನ ಹೊಟ್ಟೆಯನ್ನು ಕಹಿಯಾಗುವಂತೆ ಮಾಡುವದು. ಆದರೆ ನಿನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿರುವದು ಎಂದು ಹೇಳಿದನು. ಆಗ ನಾನು ಆ ಚಿಕ್ಕ ಸುರುಳಿಯನ್ನು ಆ ದೂತನ ಕೈಯಿಂದ ತೆಗೆದುಕೊಂಡು ತಿಂದುಬಿಟ್ಟೆನು. ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು; ಅದನ್ನು ತಿಂದ ಮೇಲೆ ನನ್ನ ಹೊಟ್ಟೆಯು ಕಹಿಯಾಯಿತು. ಆ ಮೇಲೆ - ಇನ್ನೂ ನೀನು ಅನೇಕವಾಗಿರುವ ಪ್ರಜೆ ಜನ ಬಾಷೆ ರಾಜ ಇವರ ವಿಷಯದಲ್ಲಿ ಪ್ರವಾದನೆ ಹೇಳಬೇಕೆಂದು ನನಗೆ ತಿಳಿಸಲ್ಪಟ್ಟಿತು.

ಇಲ್ಲಿ ನಾವು ನೋಡುತ್ತೇವೆ, ಯೋಹಾನನು ಪುಸ್ತಕವನ್ನು ತಿಂದಾಗ, ಅವನ ಬಾಯಿಯಲ್ಲಿ ಅದು ಜೇನಿನಂತೆ ಸಿಹಿಯಾಗಿತ್ತು. ಅದು ದೇವರ ವಾಕ್ಯದ ಮೂಲಕ ನಮಗೆ ಸಿಗುವ ಕೃಪೆಯ ಚಿತ್ರವಾಗಿದೆ. ಆದರೆ ವಾಕ್ಯವು ಅವನ ಒಳಗೆ ಹೋಗುವ ಹೊತ್ತಿಗೆ ಅದು ಕಹಿಯಾಗಿತ್ತು. ದೇವರ ವಾಕ್ಯದಲ್ಲೂ ಸತ್ಯವಿದೆ - ನಮ್ಮ ಪಾಪಕ್ಕೆ ನ್ಯಾಯ ತೀರ್ಪು ನೀಡುವ ಸತ್ಯ ಎಂಬುದನ್ನು ಇದು ಸೂಚಿಸುತ್ತದೆ. ಅದು ಕೇವಲ ಕೃಪೆ ಮಾತ್ರವಲ್ಲ, ಆದರೆ ಸತ್ಯ ಕೂಡ. ಪ್ರಕಟನೆ ಪುಸ್ತಕದಲ್ಲಿ ಕೃಪೆ ಮತ್ತು ನ್ಯಾಯ ತೀರ್ಪಿನ ಚಿತ್ರಗಳನ್ನು ಪರ್ಯಾಯವಾಗಿ ನಾವು ನೋಡುತ್ತೇವೆ. ಅದು ಇಡೀ ಪುಸ್ತಕದಾದ್ಯಂತ ಪರ್ಯಾಯವಾಗಿ ಸಿಹಿ ಮತ್ತು ಕಹಿಯಾಗಿದೆ. ದೇವರ ವಾಕ್ಯವನ್ನು ಪ್ರವಾದಿಸುವ (ಬೋಧಿಸುವ) ಸರಿಯಾದ ರೀತಿಯನ್ನೂ ನಾವಿಲ್ಲಿ ಕಾಣುತ್ತೇವೆ. ದೇವರ ವಾಕ್ಯವನ್ನು ನಾವಾಗಿ ಮೊದಲು ದೇವರಿಂದ ಸ್ವೀಕರಿಸಬೇಕು, ತಿನ್ನಬೇಕು, ಮತ್ತು ಜೀರ್ಣಿಸಿಕೊಳ್ಳಬೇಕು. ಆಗ ಮಾತ್ರ ಇತರರಿಗೆ ಕೊಡಲು ದೇವರು ನಮಗೆ ಪ್ರವಾದನೆಯ ವಾಕ್ಯವೊಂದನ್ನು ಕೊಡುವರು. ಇದು ಕೇವಲ ಪುಸ್ತಕಗಳನ್ನು ಓದಿ, ಸಂದೇಶಗಳನ್ನು ಕೇಳಿ ಮತ್ತು ತಮ್ಮ ಮೆದುಳಿಗೆ ವ್ಯಾಯಾಮ ನೀಡಿ ಮನದಟ್ಟು ಮಾಡುವ ಪ್ರಸಂಗಕ್ಕಾಗಿ ಸಂದೇಶಗಳನ್ನು ತಯಾರು ಮಾಡುವ ಅನೇಕ ಬೋಧಕರ ರೀತಿಗಳಿಗಿಂತ ವಿಭಿನ್ನವಾದುದು.

ನಾವು ದೇವರ ವಾಕ್ಯವನ್ನು ಸ್ವೀಕರಿಸುವಾಗ, ಕೇವಲ ಸಿಹಿಯಾದ ಭಾಗವಾದ - "ಕೃಪೆ"ಯಲ್ಲಿ ಮಾತ್ರ ಆಸಕ್ತರಾಗಿರಲು ನಮಗೆ ಬಹು ಸುಲಭ. ದೇವರ ಇಡೀ ಬೋಧನೆಯು ನಮ್ಮ ಆಂತರ್ಯವನ್ನು ಭೇದಿಸಲು ಬಿಡದೆ ಕೇವಲ ಸಿಹಿಯಾದ "ಕೃಪೆ"ಯನ್ನೇ ನಾವು ಸವಿಯಬಹುದು. ನಾವು ನಮ್ಮಲ್ಲಿ ಕಂಡುಕೊಳ್ಳುವ ಪಾಪವನ್ನು ನ್ಯಾಯ ತೀರ್ಪಿಗೆ ಒಳಪಡಿಸಬೇಕಾಗುವುದರಿಂದ ನಾವು ನಂತರದ ಭಾಗವಾದ ಸತ್ಯವನ್ನು ಸವಿಯುವುದಿಲ್ಲ. "ನ್ಯಾಯ ವಿಚಾರಣೆಯು ನಮ್ಮಿದಲೇ ಮೊದಲು ಪ್ರಾರಂಭವಾಗಬೇಕು"(1 ಪೇತ್ರ.4:17).

ಬಹಳಷ್ಟು ಕ್ರೈಸ್ತರು ದೇವರ ವಾಕ್ಯವನ್ನು ಚ್ಯೂಯಿಂಗ್ ಗಮ್ ತಿಂದ ಹಾಗೆ ತಿನ್ನುತ್ತಾರೆ/ಜಗಿಯುತ್ತಾರೆ. ಅವರು ಅದನ್ನು ಜಗಿಯುತ್ತಾ ಜಗಿಯುತ್ತಾ ಇರುತ್ತಾರೆ ಯಾಕೆಂದರೆ ಅದು ಸಿಹಿಯಾಗಿರುತ್ತದೆ. ನಂತರ ಅದನ್ನವರು ಉಗುಳುತ್ತಾರೆ. ಜೀರ್ಣ ಹೊಂದಲು ಅದು ಅವರ ಹೃದಯಗಳಿಗೆ ಇಳಿಯುವುದಿಲ್ಲ. ತಮ್ಮನ್ನು ತೀರ್ಪುಮಾಡಿಕೊಳ್ಳಲು ಅವರು ದೇವರ ವಾಕ್ಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

ನಾವು ಅನುಭವಿಸುವ ಅನೇಕ ಕಹಿ ಅನುಭವಗಳ ಮೂಲಕ ನಾವು ಕೇಳುವ ದೇವರ ವಾಕ್ಯವನ್ನು ನಾವು ಜೀರ್ಣಿಸುವಂತೆ ದೇವರು ಮಾಡುತ್ತಾರೆ. ಆದರೆ ಆ ಎಲ್ಲಾ ಕಹಿ ಅನುಭವಗಳಲ್ಲಿ ನಾವು ದೇವರ ಸಾಂತ್ವನವನ್ನೂ ಅನುಭವಿಸುತ್ತೇವೆ (2 ಕೊರಿಂಥದವರಿಗೆ 1:4). ಈ ಮೂಲಕ ಮಾತ್ರವೇ ನಮ್ಮ ಜನಾಂಗದಲ್ಲಿ ನಾವು ಪ್ರವಾದನೆಯ ಸೇವೆಯನ್ನು ಕಾಣುವೆವು.

ಯೋಹಾನನು ದೇವರ ವಾಕ್ಯವನ್ನು ಜೀರ್ಣಿಸಿದ ಮೇಲೆ, "ನೀನು ಈಗ ಪ್ರವಾದಿಸಬೇಕು" ಎಂದು ಯೋಹಾನನಿಗೆ ಕರ್ತರು ಹೇಳಿದರು.

ಇದನ್ನು ಕರ್ತರು ಅವನಿಗೆ ಮೊದಲು ಹೇಳಿದುದರ ಜೊತೆ ಹೋಲಿಸಿ ನೋಡಿ - ಅವನು ಕೇಳಿಸಿಕೊಂಡದ್ದನ್ನು ಬರೆಯಬಾರದೆಂದು ಅವನಿಗೆ ಹೇಳಿದರು. ನಾವು ಇತರರೊಡನೆ ಏನನ್ನು ಹಂಚಿಕೊಳ್ಳಬೇಕು ಅಥವಾ ಹಂಚಿಕೊಳ್ಳಬಾರದೆಂದು ನಮಗೆ ತಿಳಿದಿರಬೇಕು.

ಪೌಲನು ಒಮ್ಮೆ ಮೂರನೇ ಆಕಾಶಕ್ಕೆ ಎತ್ತಲ್ಪಟ್ಟಿದ್ದನು. ಆದರೆ ಹದಿನಾಲ್ಕು ವರ್ಷಗಳ ಕಾಲ ಅದನ್ನು ಅವನು ಯಾರೊಡನೆಯೂ ಉಲ್ಲೇಖಿಸಲಿಲ್ಲ ಮತ್ತು ಅದನ್ನು ಉಲ್ಲೇಖಿಸಿದಾಗ ಅವನು ಹೇಳಿದೇನೆಂದರೆ, "ಮನುಷ್ಯರು ನುಡಿಯಲಶಕ್ಯವಾದ ಹೇಳಬಾರದ ಮಾತುಗಳನ್ನು ಕೇಳಿದೆನು." (2 ಕೊರಿಂಥದವರಿಗೆ 12:4).

ತನಗೆ ದೇವರು ವೈಯಕ್ತಿಕವಾಗಿ ಮಾತಾಡಿದ್ದು ಮತ್ತು ಇತರರಿಗಾಗಿ ಮಾತಾಡಿದ್ದರ ಬಗ್ಗೆ ಯೋಹಾನನು ಸ್ಪಷ್ಟವಾಗಿ ತಿಳಿದುಕೊಂಡಿದ್ದನು.

ಅನುವಾದಾ : ಜಾನ್     ಈ ಪುಟವನ್ನು ಮುದ್ರಿಸಿಕೊಳ್ಳಿ   ಈ ಪುಟವನ್ನು ಕಳುಹಿಸಿ

"ವಾರದ ಸಂದೇಶ!" - ನಿಮ್ಮ ಯಾವುದೇ ಅನಿಸಿಕೆ ಅಥವಾ ಪ್ರಶೆಗಳಿದ್ದಲ್ಲಿ ದಯವಿಟ್ಟು ನಮಗೆ ಬರೆಯಿರಿ :
kannada@cfcindia.com, cfc@cfcindia.com
ಈ ಪುಟವನ್ನು ಸ್ನೇಹಿತರಿಗೆ ಕಳುಹಿಸಿ | ವಾರದ ಸಂದೇಶ | ದೈವ ಸಂದೇಶಗಳು | ಆಡಿಯೋ| ವಿಡಿಯೋ | ಸಂಪರ್ಕಿಸಿರಿ

© Copyright - Christian Fellowship Church , Bangalore. (INDIA)