|
"ಕ್ರಿಸ್ತನು ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು" (ಎಫೆ. 5:25). ಸಭೆಯನ್ನು ಕಟ್ಟಲು, ಕ್ರಿಸ್ತನು ಸಭೆಯನ್ನು ಪ್ರೀತಿಸಿದಂತೆ, ನಾವೂ ಸಭೆಯನ್ನು ಪ್ರೀತಿಸಬೇಕು. ನಮ್ಮ ಹಣ ಹಾಗೂ ವೇಳೆಯನ್ನು ಕೊಡುವುದು (ವ್ಯಯಿಸುವುದು) ಮಾತ್ರ ಸಾಲದು. ನಾವು ನಮ್ಮನೇ - ನಮ್ಮ ಸ್ವಂತ-ಜೀವವನ್ನು ಕೊಡಬೇಕು. ದೇವರು ಮನುಷ್ಯನಿಗಿರುವ ತನ್ನ ಪ್ರೀತಿಯನ್ನು ವಿವರಿಸಲು ಬಯಸಿದಾಗ, ನವಜಾತ ಶಿಶುವಿಗೆ ಇರುವ ತಾಯಿಯ ಪ್ರೀತಿ (ಯೆಶಾಯನು 49:15) - ಈ ಪ್ರಾಪಂಚಿಕ ಉಧಾಹರಣೆಯ ಮೂಲಕ ಮಾತ್ರ ಅವನು ತನ್ನ ಪ್ರೀತಿಯನ್ನು ಹೋಲಿಸಿದನು. ನೀನೊಂದು ತಾಯಿಯನ್ನು ಗಮನಿಸಿದರೆ, ಮಗುವಿಗಾಗಿ ಆ ತಾಯಿಯ ಪ್ರೀತಿಯು ಬಹಳವಾಗಿ ತ್ಯಾಗದಿಂದ ಕೂಡಿದ್ದಾಗಿದೆ. ಬೆಳಗಿನ ಜಾವದಿಂದ ತಡ ರಾತ್ರಿಯತನಕ ಮತ್ತು ಇಡೀ ರಾತ್ರಿಯಲ್ಲಿ ಒಬ್ಬ ತಾಯಿಯು ತನ್ನ ಮಗುವಿಗಾಗಿ ಬಹಳವಾಗಿ ತ್ಯಾಗ ಮಾಡುತ್ತಾಳೆ. ಅವಳು ಏನನ್ನೂ ತಿರುಗಿ ಪಡೆಯುವುದಿಲ್ಲ. ಅವಳು ನೋವು ಮತ್ತು ಅನಾನುಕೂಲತೆಯನ್ನು ಸಂತೋಷದಿಂದ, ಏನನ್ನೂ ನಿರೀಕ್ಷಿಸದೆ, ವರ್ಷ ಬಿಟ್ಟು ವರ್ಷ ತನ್ನ ಮಗುವಿಗಾಗಿ ಸಹಿಸುತ್ತಾಳೆ. ಅದೇ ರೀತಿ ದೇವರು ನಮ್ಮನ್ನು ಪ್ರೀತಿಸುತ್ತಾರೆ. ಅದನ್ನೇ ಅವರು ನಮಗೂ ಕೊಡಲು ಬಯಸುತ್ತಾರೆ. ಪ್ರಪಂಚದಲ್ಲಿ ಎಲ್ಲಿಯೂ ದೇವರಂತೆ ಪರಸ್ಪರ ಪ್ರೀತಿಸುತ್ತೇವೆಂದು ಪ್ರಾಮಾಣಿಕವಾಗಿ ಹೇಳಬಲ್ಲಂಥಹ ಅನ್ಯೋನ್ಯತೆಯನ್ನು (ಸಭೆಯನ್ನು) ಕಾಣುವುದು ಅಸಾಧ್ಯ. ಅನೇಕ ವಿಶ್ವಾಸಿಗಳು ತಮ್ಮ ಗುಂಪನ್ನು ಸೇರುವ ಹಾಗೂ ತಮ್ಮೊಡನೆ ಒಪ್ಪುವವರನ್ನು ಮಾತ್ರ ಪ್ರೀತಿಸುತ್ತಾರೆ. ಅವರ ಪ್ರೀತಿಯು ಮಾನವೀಯವಾದುದು ಹಾಗೂ ತಾಯಿಯರ ತ್ಯಾಗದ ಪ್ರೀತಿಯಿಂದ ಎಷ್ಟೋ ದೂರವಿರುವಂಥದ್ದು! ಆದರೂ ದೈವೀಕ ಪ್ರೀತಿಯೇ ನಾವು ಸಾಗಬೇಕಾದ ಗುರಿಯಾಗಿರಬೇಕು.
ತನ್ನ ಸುತ್ತಲಿರುವ ಇತರರು ತನ್ನ ಮಗುವಿಗಾಗಿ ತ್ಯಾಗ ಮಾಡುತ್ತಾರೋ ಇಲ್ಲವೊ, ಎಂದು ಒಬ್ಬ ತಾಯಿಯು ಗಮನಿಸುವುದಿಲ್ಲ. ಅವಳು ಸಂತೋಷದಿಂದ ತನ್ನೆಲ್ಲವನ್ನೂ ತ್ಯಾಗಮಾಡುತ್ತಾಳೆ. ಅದೇ ರೀತಿ ಸಭೆಯನ್ನು ತನ್ನ ಮಗುವೆಂದು ಕಂಡವನು ಇತರರು ಸಭೆಗಾಗಿ ಏನನ್ನಾದರೂ ತ್ಯಾಗ ಮಾಡುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಅವನು ಸಂತೋಷದಿಂದ ತನ್ನನ್ನೇ ತ್ಯಾಗಮಾಡುತ್ತಾನೆ ಹಾಗೂ ಯಾರ ಬಗ್ಗೆಯೂ ಎಂಥದೇ ದೂರು ಅಥವಾ ಬೇಡಿಕೆಯನ್ನಿಡುವುದಿಲ್ಲ. ಇತರರು ಸಭೆಗಾಗಿ ಏನೂ ತ್ಯಾಗ ಮಾಡುವುದಿಲ್ಲವೆಂದು ದೂರುವವರು ತಾಯಿಯರಲ್ಲ ಬದಲಾಗಿ ಬಾಡಿಗೆಯ ದಾದಿಯರು (ನರ್ಸುಗಳು). ಅಂಥಹ ದಾದಿಯರಿಗೆ ನಿಗದಿಸಲ್ಪಟ್ಟ ಕೆಲಸದ ಸಮಯವಿದೆ ಹಾಗೂ ನಂತರದ 8 ಗಂಟೆಯ ಶಿಫ್ಟಿನ ದಾದಿ ಸಮಯಕ್ಕೆ ಸರಿಯಾಗಿ ಬಾರದಿದ್ದಾಗ, ಆಕೆ ದೂರುತ್ತಾಳೆ.
ಆದರೆ, ಒಬ್ಬ ತಾಯಿಯು ದಿನಕ್ಕೆ ಎಂಟು ಗಂಟೆಯ ಶಿಫ್ಟಿನಲ್ಲಿ ಕೆಲಸ ಮಾಡುವುದಿಲ್ಲ. ಆಕೆ ವರ್ಷ ಬಿಟ್ಟು ವರ್ಷ ಪ್ರತೀ ದಿನ 24 ಗಂಟೆಗಳ ಕಾಲ ಕೆಲಸ ಮಾಡುತ್ತಾಳೆ ಮತ್ತು ಅದಕ್ಕೆ ಅವಳಿಗೆ ಸಂಬಳ ಕೂಡಾ ಸಿಗುವುದಿಲ್ಲ. ಅವಳ ಮಗು 20 ವರ್ಷದವನಾಗಿದ್ದಾಗ್ಯೂ ಅವಳ ಕೆಲಸ ಮುಗಿಯುವುದಿಲ್ಲ!! ಕೇವಲ ತಾಯಂದಿರಲ್ಲಿ ತಮ್ಮ ಮಕ್ಕಳಿಗಾಗಿ ಪ್ರತೀ ದಿನ ಹಾಲಿರುತ್ತದೆ. ತಾವು ಆರೈಕೆ ಮಾಡುತ್ತಿರುವ ಮಕ್ಕಳಿಗೆ ದಾದಿಯರು ಹಾಲು ಉತ್ಪಾದಿಸಲಾಗುವುದಿಲ್ಲ. ಅದೇ ರೀತಿ ಸಭೆಯಲ್ಲಿ ತಾಯಿಯಂತೆ ಇರುವವರಲ್ಲಿ ತಮ್ಮ ಆತ್ಮಿಕ ಮಕ್ಕಳಿಗಾಗಿ ಪ್ರತಿಯೊಂದು ಕೂಟದಲ್ಲಿ ಒಂದು ವಾಕ್ಯವಿರುತ್ತದೆ. ಅನೇಕ ಸಭಾಹಿರಿಯರಲ್ಲಿ ತಮ್ಮ ಸಭೆಗಾಗಿ ವಾಕ್ಯವಿರುವುದಿಲ್ಲ. ಏಕೆಂದರೆ ಅವರು ತಾಯಿಯರಲ್ಲ, ದಾದಿಯರು.
ಒಬ್ಬ ತಾಯಿಯು ತನ್ನ ಮಕ್ಕಳಿಂದ ಯಾವ ಸಂಭಾವನೆಯನ್ನೂ ನಿರೀಕ್ಷಿಸುವುದಿಲ್ಲ. ಯಾವೊಬ್ಬ ಮಗುವೂ ತನ್ನ ತಾಯಿಯ ಸೇವೆಗಾಗಿ ಆಕೆಗೆ ಸಂಬಳವನ್ನು ಕೊಡುವುದಿಲ್ಲ. (ದಾದಿಯರಿಗೆ ಕೊಡುವಂತೆ) ಗಂಟೆಗೆ 20 ರುಪಾಯಿಗಳ ಪ್ರಕಾರ ನೀನು ಒಬ್ಬ ತಾಯಿಯ ಸಂಬಳವನ್ನು ಲೆಕ್ಕ ಮಾಡುವುದಾದರೆ, ಒಂದು ಮಗುವು ತಾನು 20 ವರ್ಷಗಳಾಗುವಷ್ಟರಲ್ಲಿ 3 ಮಿಲಿಯನ್ ರುಪಾಯಿಗಳನ್ನು ಕೊಡಬೇಕಾಗುತ್ತದೆ ಎಂಬುದನ್ನು ನೀನು ಕಂಡುಕೊಳ್ಳುವಿ!! ಅಂಥಹ ಮೊತ್ತವನ್ನು ಯಾವ ಮಗು ತಾನೇ ತನ್ನ ತಾಯಿಗೆ ನೀಡಬಲ್ಲುದು?
ಈಗ ನಮಗೆ ಬರುವ ಪ್ರಶ್ನೆಯೆಂದರೆ: ಯಾವುದೇ ಸಂಭಾವನೆಯನ್ನು ಸ್ವೀಕರಿಸದೆ, ದಿನ ಬಿಟ್ಟು ದಿನ, ವರ್ಷ ಬಿಟ್ಟು ವರ್ಷ ತನ್ನನ್ನೇ ಕೊಡುತ್ತಾ, ಯೇಸುವು ಬರುವ ತನಕ, ಕರ್ತನಿಗಾಗಿ ಹಾಗೂ ಅವನ ಸಭೆಗಾಗಿ ಹೀಗೆ ಕೆಲಸ ಮಾಡಲು ಯಾರು ಇಚ್ಚಿಸುತ್ತಾರೆ? ದೇವರು ಅಂಥಹ ಒಬ್ಬ ವ್ಯಕ್ತಿಯನ್ನು ಕಂಡರೆ, ತ್ಯಾಗದ ಆತ್ಮ ಇಲ್ಲದೆ ತನ್ನ ಸೇವೆ ಮಾಡಲು ಪ್ರಯತ್ನಿಸುತ್ತಿರುವ ಅರೆ-ಮನಸ್ಸಿನ (ಹೃದಯದ) 10,000 ವಿಶ್ವಾಸಿಗಳಿಗಿಂತ ಅಂಥಹ ವ್ಯಕ್ತಿಯನ್ನು ತನ್ನ ಸಭೆಯನ್ನು ಕಟ್ಟಲು ದೇವರು ಬಳಸುತ್ತಾರೆ.
ಯೇಸುವು ಮರಳಿಬರುವಾಗ ಹಾಗೂ ನೀನು ಅವನ ಮುಂದೆ ನಿಲ್ಲುವಾಗ ನೀನು ಜೀವಿಸಿದ ರೀತಿಯ ಬಗ್ಗೆ ನಿನಗೆ ಪರಿತಾಪ ಇರುವುದೋ ಅಥವಾ ದೇವರ ಸಾಮ್ರಾಜ್ಯಕ್ಕಾಗಿ, ಉಪಯುಕ್ತತೆಯಿಂದ ಜೀವಿಸಿದ ಜೀವನದ ಬಗ್ಗೆ ನೀನು ಹಿಂದೆ ನೋಡಬಲ್ಲೆಯಾ? ಅನೇಕರು ಸರಿಯಾದ ಮಾರ್ಗದಿಂದ ಪಕ್ಕಕ್ಕೆ ಸರಿದು, ತಮ್ಮ ಜೀವನವನ್ನು ಈ ಪ್ರಪಂಚದಲ್ಲಿ ವ್ಯರ್ಥಗೊಳಿಸುತ್ತಿದ್ದಾರೆ. ತುಂಬಾ ತಡವಾಗುವ ಮುನ್ನ ಎಚ್ಚೆತ್ತುಕೋ ಹಾಗೂ ನಿನಗೆ ತ್ಯಾಗದ ದಾರಿಯನ್ನು ತೋರಿಸುವಂತೆ ದೇವರನ್ನು ಕೇಳು. ಕೇಳಲು ಕಿವಿಯುಳ್ಳವನು ಕೇಳಲಿ.
|