ಅನೇಕ ಕ್ರೈಸ್ತರು ದೇವರ ನೀತಿ ಮಟ್ಟಕ್ಕೆ ಏರದೇ ಇರುವುದಕ್ಕೆ ಕಾರಣವೇನೆಂದರೆ, ಅವರು ತಮ್ಮ ಹೊರತೋರಿಕೆಯ (ನೇಮ ನಿಷ್ಠೆಗಳಿಂದ ಉಂಟಾಗುವ) ನೀತಿವಂತಿಕೆಯಲ್ಲೇ ತೃಪ್ತಿಹೊಂದಿರುತ್ತಾರೆ.
ಧರ್ಮಶಾಸ್ತ್ರವನ್ನು ಆಧಾರವಾಗಿರಿಸಿರುವ ನೀತಿಯು (ಒಳ್ಳೇದರ ಕೆಟ್ಟದರ ಅರುಹನ್ನು ಹುಟ್ಟಿಸುವ ಮರ) ಸರಿ-ತಪ್ಪುಗಳನ್ನು ಗುರುತಿಸಬಹುದು, ಆದರೆ ಅದು ಮರಣದೆಡೆಗೆ ಒಯ್ಯುವ ದಾರಿ. ದೇವರ ನೀತಿಯು (ಜೀವವೃಕ್ಷ) ಪವಿತ್ರಾತ್ಮನಿಂದ ನಡೆಸಲ್ಪಡುವುದು.
ಯೇಸುವು ತನ್ನ ಜೀವತೆತ್ತಿದ್ದು ನಮ್ಮ ಪಾಪ ಮನ್ನಣೆಗೆ ಮಾತ್ರವೇ ಅಲ್ಲ, ಇನ್ನೂ ಉನ್ನತವಾದ ಉದ್ದೇಶಕ್ಕಾಗಿ.
ದೇವರನ್ನು ಮಹಿಮೆಗೊಳಿಸುವದರ ರಹಸ್ಯ, ಅವರು ನಮಗಾಗಿ ಇರಿಸಿರುವ ಕಾರ್ಯವನ್ನು ಪೂರೈಸುವದೇ ಆಗಿದೆ(ಯೋಹಾ. 17:4).
ದೇವರ ನೀತಿಯು:
ಯೇಸುವಿನ ಜಯ ಜೀವಿತದ ರಹಸ್ಯ: "ನನ್ನ ಚಿತ್ತದಂತೆ ನಡೆಯುವದಕ್ಕಾಗಿ ನಾನು ಬಂದಿಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವದಕ್ಕೆ ಪರಲೋಕದಿಂದ ಬಂದೆನು" (ಯೋಹಾ. 6:38).
ಎಲ್ಲಾ ನ್ಯಾಯ ಸಮ್ಮತ ಕಾರ್ಯಗಳಲ್ಲಿ ಲಾಭದಾಯಕವಾದವುಗಳನ್ನು ಮಾತ್ರ ಆಯ್ದುಕೊಂಡು ಕೈಗೊಳ್ಳುವುದರಲ್ಲಿದೆ (1 ಕೊರಿ. 6:12).
ನಾವು ನಮ್ಮನ್ನೇ ತೃಪ್ತಿ ಪಡಿಸದಿರುವಂತೆ ದೇವರಾತ್ಮನು ನಮ್ಮನ್ನು ನಡೆಸುತ್ತಾನೆ (ರೋಮಾ. 15:3).
ನಾವು ಯಾವ ಸಮಯದಲ್ಲಿಯೂ ಇತರರಿಗಾಗಿ ತೊಂದರೆ ಅನುಭವಿಸಲು ಸಿದ್ದರೆಂದು ತೊರಿಸುವುದಾಗಿದೆ.(ಉದಾಹರಣೆಗೆ, ನಿಕೊದೇಮನು ನಡುರಾತ್ರಿಯಲ್ಲಿ ಕದತಟ್ಟಿದರೂ ಯೇಸುವು ಆತನನ್ನು ಬರಮಾಡಿಕೊಂಡರು - ಯೋಹಾ. 3:2).
ನಮ್ಮ ಮನಸ್ಸೇಚ್ಚೆಯಂತೆ ಯಾವುದಾದರೂ, ಯಾವಾಗಲೂ ಮಾಡದೆ, ದೇವರ ಸೂಚನೆಗೆ ಅನುಸಾರವಾಗಿ ಮಾತ್ರವೇ ಸಾಗುವಂತೆ ನಮ್ಮನ್ನು ಬದಲಾಯಿಸುವದು (ಯೋಹಾ. 7:6).
ಯಾರಿಂದಲೂ ಏನನ್ನೂ ಅಪೇಕ್ಷಿಸದೆ, ಯಾರ ಪ್ರತಿಯಾಗಿಯೂ ಮನದೊಳಗೆ ದೂಷಣೆಯನ್ನು ಹೊಂದದಿರುವದು. ಯೇಸುವು ಇತರರಿಂದ ರಾತ್ರಿ ಮಲಗಲು ಸ್ಥಳವನ್ನೂ ಸಹ ಬಯಸಲಿಲ್ಲ (ಯೋಹಾ. 7:53-8:2).
ಮಾನವೀಯವಾಗಿ ನೋಡಿದರೆ ಸಮಂಜಸವಾಗಿ ಕಾಣದಿದ್ದರೂ, ಬಾಹ್ಯ ಉಜ್ಜೀವನ ನಡೆಯುವ ಸ್ಥಳವನ್ನೂ ಸಹ ದೇವರಾತ್ಮನು ತ್ಯಜಿಸಬಹುದು. ( ಲೂಕ. 4:40-44 ; 1 ಕೊರಿ. 2:14-15 ).
ಅಪ್ರಬುದ್ದ ಮಗುವಿನಿಂದ (ರೋಮಾ. 8:16), ಪ್ರಬುದ್ದ ಮಗನಾಗಲು (ಮತ್ತು ಮಗಳಾಗಲು) ಪವಿತ್ರಾತ್ಮನು ನಡೆಸುತ್ತಾನೆ, ಅಂದರೆ ಪವಿತ್ರಾತ್ಮನಿಂದ ಜನಿಸಿದ್ದು ಮಾತ್ರವಲ್ಲ, ಪವಿತ್ರಾತ್ಮನಿಂದ ನಡೆಸಲ್ಪಡುವುದು (ರೋಮಾ. 8:14).
ಯಾವುದೇ ಕಾರ್ಯದಲ್ಲಿ ಮಗ್ನರಾಗಿದ್ದರೂ, ದೇವರ ತಡೆಯನ್ನು ಅನುಭವಿಸಲು ನಮ್ಮನ್ನು ಸದಾ ಸಿದ್ದರಾಗಿಸುವುದು.
ಈರುಳ್ಳಿಯನ್ನು ಪದರು ಪದರಾಗಿ ಕೀಳುವಂತೆ, ನಮ್ಮೊಳಗಿರುವ ಸ್ವಾರ್ಥಭಾವವನ್ನು ಕೀಳುತ್ತ ಬರುವಂತೆ ನಮ್ಮನ್ನು ಪ್ರೋತ್ಸಾಹಿಸುವದು.
ಎಲ್ಲಾ ಪರಿಸ್ಥಿತಿಯಲ್ಲೂ, ಎಲ್ಲರೊಡನೆಯೂ, ಯೇಸುವಿನ ಮನಸ್ಸು ನಮ್ಮೊಳಗೆ ಹೊಂದಿರುವುದು (ಫಿಲಿ. 2:5), ಒಳಗಿರುವ ಒಣ ಹೆಮ್ಮೆ, ಸ್ವಾರ್ಥವಿಲ್ಲದಂತಹ ಮನಸ್ಸನ್ನು ಹೊಂದಿರುವುದು (ಫಿಲಿ. 2:3).
ಮೊದಲು ನಮ್ಮನ್ನೇ ನ್ಯಾಯ ವಿಚಾರಣೆ ಮಾಡುವಂತೆ, ನಡೆಸುತ್ತದೆ. (1 ಪೇತ್ರ. 4:17).
ದೇವರ ವಿಶ್ರಾಂತಿಗೆ ಪ್ರವೇಶಿಸುವುದು
ಹೆಚ್ಚಿನ ಕ್ರೈಸ್ತರು ಒಬ್ಬ ಕೋಟ್ಯಾಧಿಪತಿ ತಂದೆಯ ಮರಣಪತ್ರ(ಉಯಿಲು)ವನ್ನು ಸತ್ಯವೇದಕ್ಕಿಂತ ಹೆಚ್ಚಾಗಿ ಓದುವರು - ಏಕೆಂದರೆ ದೇವರಿಗಿಂತ ಹೆಚ್ಚಾಗಿ ಅವರು ಪ್ರೀತಿಸುವದು ಹಣವನ್ನು!
ನಾವು ಗುಣಗುಟ್ಟುವದು ಅಥವಾ ಹೃದಯದೊಳಗೆ ಅಪನಂಬಿಕೆ ಇರಿಸಿರುವದು ಇವನ್ನು ಮಾಡಿದರೆ, ನಾವು ನಂಬಿರುವದು "ದೈತ್ಯಗಾತ್ರದ" ಪಿಶಾಚಿ ಹಾಗೂ "ಮಿಡತೆ"ಯಂತಿರುವ ಯೇಸುವನ್ನು (ಅರಣ್ಯಕಾಂಡ 13:33). ದೇವರ ವಿಶ್ರಾಂತಿಯನ್ನು ಸೇರುವದೆಂದರೆ ನಮ್ಮ ದೇಹದಲ್ಲಿ ನೆಲೆಯಾಗಿರುವ ಎಲ್ಲಾ ದೈತ್ಯರನ್ನು ಸೋಲಿಸುವದು. ಇದು ನಿಮ್ಮಲ್ಲಿ ನಡೆಯಬೇಕಾದರೆ ನೀವು ಯೇಸುವನ್ನು ಸರ್ವಶಕ್ತರನ್ನಾಗಿ ಹಾಗೂ ಸೈತಾನನನ್ನು "ಮಿಡತೆ"ಯಂತೆ ಕಾಣಬೇಕು.
"ಕ್ರಿಸ್ತನು ನಮ್ಮ ಪಾಪಗಳನ್ನು ಕ್ಷಮಿಸಬಲ್ಲನು" ಎಂದು ಮಾತ್ರವೇ ಸಾರುವ ಸುವಾರ್ತೆಯು ನಿಜವಾದ 'ಸುವಾರ್ತೆ'ಯೇ ಅಲ್ಲ - ಏಕೆಂದರೆ ಅದು ನಮ್ಮನ್ನು ನಮ್ಮ ಪಾಪಗಳ ಗುಲಾಮತನದಲ್ಲಿ ಬಿಟ್ಟಿರುವದು.
ಅಪೋಸ್ತಲರು ತಪ್ಪದೆ ಸಾರುತ್ತಿದ್ದುದು, ತಾವು ಕ್ರಿಸ್ತನ ಪುನರುತ್ಥಾನದ ಸಾಕ್ಷಿಗಳು ಎಂಬುದಾಗಿ - ಅವರ ಸಾಕ್ಷಿ ಶಿಲುಬೆಯ ಮರಣದ್ದಾಗಿರಲಿಲ್ಲ! ಪ್ರತೀ ಬಾರಿ ನಾವು ಶಿಲುಬೆಯ ವಿಚಾರವನ್ನು ವಿವರಿಸುವಾಗ, ಕ್ರಿಸ್ತನ ಪುನರುತ್ಥಾನ ಶಕ್ತಿಯು ಎಂಥಹದೆಂದು ಘೋಷಿಸುವದು ಅವಶ್ಯ.
ಮಾನವನಲ್ಲಿ ಮರಣದ ಭಯವು ಇನ್ಯಾವುದೇ ಭಯಕ್ಕಿಂತ ದೊಡ್ಡದಾದದು. ಯೇಸುವು ಮರಣದ ಭಯವನ್ನು ನಿವಾರಿಸಿ ನಾವು ಎಲ್ಲಾ ಭಯಗಳಿಂದ ಪಾರಾಗುವದು ಸಾಧ್ಯವಾಗಿಸಿದರು (ಇಬ್ರಿಯ 2:14,15).
ನಾವು ಎಲ್ಲಾ ಭಯಗಳಿಂದ ಸಂಪೂರ್ಣವಾಗಿ ಪಾರಾಗಲು ಸಾಧ್ಯವಿದೆ, ಏಕೆಂದರೆ "ಯೇಸುವು ಎಂಥವರಾಗಿದ್ದಾರೋ, ನಾವು ಅಂಥವರಾಗಿಯೇ ಈ ಲೋಕದಲ್ಲಿದ್ದೇವೆ" (1 ಯೋಹಾ 4:17).
ದೇವರು ನಮ್ಮನ್ನು ಆತನಿಗೆ ವಿಧೇಯರಾಗಿ ಅಥವಾ ಅವಿಧೇಯರಾಗಿ ಇರುವ ಸ್ವಾತಂತ್ರ್ಯವನ್ನು ನೀಡದೆ ನಮ್ಮನ್ನು ಪರಿಶುದ್ಧಗೊಳಿಸುವದು ಸಾಧ್ಯವಿಲ್ಲ. ಅವರು ಮಾನವನನ್ನು ಒಂದು ’ರೋಬೋಟ್’ ಯಂತ್ರವಾಗಿ ನಿರ್ಮಿಸಲಿಲ್ಲ.
ಕೊರ್ನೇಲ್ಯನಿಗೆ ದರ್ಶನವಾದ ದೇವದೂತನು ಅವನಿಗೆ ಸುವಾರ್ತೆಯನ್ನು ಬೋಧಿಸುವದು ಸಾಧ್ಯವಿರಲಿಲ್ಲ, ಏಕೆಂದರೆ ಆ ದೇವದೂತನು ಸ್ವತಃ ಸುವಾರ್ತೆಯನ್ನು ಅನುಭವಿಸಿರಲಿಲ್ಲ (ಅಪೋಸ್ತಲ ಕೃತ್ಯಗಳು 10). ಅದಕ್ಕಾಗಿ ದೇವರಿಗೆ ಪೇತ್ರನು ಬೇಕಾಗಿದ್ದನು. ನಾವು ಅನುಭವದಿಂದ ತಿಳಿದಿರದ ಏನನ್ನೂ ಬೋಧಿಸಲು ದೇವರು ಸಮ್ಮತಿಸುವದಿಲ್ಲ.
ಆದಾಮ ಮತ್ತು ಹವ್ವರ ಜೀವನದ ಮೊದಲನೇ ದಿನದಲ್ಲಿ (ದೇವರೊಂದಿಗೆ ಅವರಿಬ್ಬರು ನಡೆದ ಆ ಮೊದಲನೇ ಸಬ್ಬತ್ ದಿನ) ಸೈತಾನನು ಅವರನ್ನು ಶೋಧನೆಗೆ ಒಳಪಡಿಸಲು ಸಾಧ್ಯವಾಗಲಿಲ್ಲ. ನಾವು ದೇವರ ಸನ್ನಿಧಿಯಲ್ಲಿ ನಡೆಯುತ್ತಾ ಸಾಗುವಾಗ ಶೋಧನೆಯು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. "ಅಚಲ ವಿಶ್ರಾಂತಿಕರವಾದ ತಂಗುದಾಣ, ದೇವರ ಹೃದಯದ ಬಳಿಯಲ್ಲಿರುವ ಆ ತಾಣ, ಪಾಪದ ಪಾಶಕ್ಕೆ ಅಲ್ಲಿ ಎಡೆಯಿಲ್ಲ".
ಕ್ರಿಸ್ತನನ್ನು ಮತ್ತು ಅವರ ಸಭೆಯನ್ನು ಪ್ರೀತಿಸುವುದು
ಕ್ರಿಸ್ತನ ಪ್ರೀತಿಯು:
ಗೆತ್ಸೇಮನೆಯಲ್ಲಿ ಕಂಡುಬರುತ್ತದೆ. ನಮಗಾಗಿ ಯೇಸುವು ತನ್ನ ಮತ್ತು ತಂದೆಯ ನಡುವಿನ ನಿತ್ಯ ಅನ್ಯೋನ್ಯತೆಯನ್ನು ಶಿಲುಬೆಯ ಮೇಲೆ ಮೂರು ಗಂಟೆಗಳ ಕಾಲ ಕಡಿದುಕೊಳ್ಳುವದಕ್ಕೆ ತಾನು ಸಿದ್ಧನೆಂದು ತಂದೆಯಾದ ದೇವರಿಗೆ ತಿಳಿಸಿದರು. ಯೇಸುವು ಕುಡಿಯಲು ಅಂಜಿದ ಪಾತ್ರೆಯು ಇದೇ ಆಗಿತ್ತು.
ಶಿಲುಬೆಯ ಮೇಲೆ ನಮಗೋಸ್ಕರ ಅವರು ಅನುಭವಿಸಿದ ನರಕದ ಅನುಭವದಲ್ಲಿ (= ತಂದೆಯಿಂದ ಮೂರು ಗಂಟೆಗಳ ಕಾಲ ಕೈಬಿಡಲ್ಪಟ್ಟ ಅನುಭವ) ಕಂಡುಬರುತ್ತದೆ.
ಕ್ರಿಸ್ತನು ಸಭೆಗೆ ತನ್ನನ್ನು ಒಪ್ಪಿಸಿಕೊಟ್ಟದ್ದರಲ್ಲಿ ಕಾಣುತ್ತದೆ (ಎಫೆ. 5:25).
ತನಗೆ ಸುಮ್ಮನೆ ದೊರೆತ(ಬೆಲೆಯಿಲ್ಲದ) ಯಾವುದನ್ನೂ ತಂದೆಗೆ ಅರ್ಪಿಸಲಿಲ್ಲ ಎನ್ನುವ ಸತ್ಯಾಂಶದಲ್ಲಿ ತೋರಿಬರುತ್ತದೆ (2 ಸಮುವೇಲನು 24:24).
ನಮ್ಮ ಪಾಪದ ಭಯಂಕರತೆಯನ್ನು ನಾವು ತಿಳಿದುಕೊಳ್ಳದಿದ್ದಲ್ಲಿ ಶಿಲುಬೆಯ ಅಮೂಲ್ಯತೆಯು ನಮಗೆ ಗೋಚರವಾಗದು.
ನಾವು ಕ್ಷಮಿಸಲ್ಪಟ್ಟಿರುವದು "ಸ್ವಲ್ಪ ಮಾತ್ರವೇ" ಎಂದು ನಾವು ಎಣಿಸಿದಲ್ಲಿ, ಹಣವೇ ದೇವರಿಗಿಂತ ಪ್ರಾಮುಖ್ಯವಾದದು ಎನ್ನುವದು ನಮ್ಮ ಅಭಿಪ್ರಾಯವಾಗುವದು (ಲೂಕ 7:47).
ಶಿಲುಬೆಯ ಮೇಲೆ ಕ್ರಿಸ್ತನು ನಮಗಾಗಿ ಅನುಭವಿಸಿದ "ಅನಾನುಕೂಲತೆ"ಗೆ ಕರ್ತನಾದ ದೇವರ ಸೇವೆಯಲ್ಲಿ ನಾವು ಅನುಭವಿಸುತ್ತಿರುವ ಅನಾನುಕೂಲತೆಗಳನ್ನು ಹೋಲಿಸಿದಾಗ, ಇವು ಏನೇನೂ ಇಲ್ಲ ಎಂದು ನಮಗೆ ಗೋಚರವಾಗುತ್ತದೆ.
ಯೇಸುವು ತನ್ನ ಮೇಲೆ ಮತ್ತು ತನ್ನ ದೇಹವಾದ ಕ್ರಿಸ್ತನ ಸಭೆಯ ಮೇಲೆ ಇಂಥಹ ಪ್ರೀತಿಯನ್ನು ಇರಿಸಿರುವವರನ್ನು ಹುಡುಕುತ್ತಿದ್ದಾರೆ.
ಮೇಲಿನ ಸಂದೇಶಗಳನ್ನು ಪೂರ್ಣರೂಪದಲ್ಲಿ ಈ ವೆಬ್‍ಸೈಟಿನಲ್ಲಿ ಕೇಳಬಹುದು: